ಸಿ ಎಸ್ ದ್ವಾರಕಾನಾಥ್ ಕಂಡಂತೆ ದೊಂಬಿದಾಸ

ಹಣೆಗೆ ವಿಭೂತಿ ಇಟ್ಥು ತಲೆಗೆ ಮುಂಡಾಸು ಸುತ್ತಿ ಬಿಳಿ ಅಂಗಿ, ಬಿಳಿ ಪಂಚೆ, ಬೇಡಿ ಪಡೆದ ಹಳೇಕೋಟು ತೊಟ್ಟು ಹೆಗಲಿಗೆ ಜೋಳಿಗೆ ಹಾಕಿ ಕೈಯಲ್ಲಿ ತಂಬೂರಿಯನ್ನೋ, ನಾ ಶ್ರುತಿ ಪೆಟ್ಟಿಗೆಯನ್ನೋ ಹಿಡಿದು ನುಡಿಸುತ್ತಾ ತನ್ನ ನಿತ್ಯ ಕಾಯಕವಾದ ಬಿಕ್ಷೆಗೆ ಹೊರಡುವ ದೊಂಬಿದಾಸ ಸಮುದಾಯದ ಸ್ಥಿತಿಯಿದು. ದೊಂಬಿದಾಸರಿಗೆ ತಿಳಿದ ವಿದ್ಯೆಯೆಂದರೆ ಸುಶ್ರಾವ್ಯವಾಗಿ, ಹಾಡುವುದು ವಾದ್ಯನುಡಿಸುವುದು, ಗ್ರಾಮಗಳಲ್ಲಿ ನಾಟಕದ ತರಬೇತಿ ನೀಡುವುದು ಖಾಯಿಲೆಯಿಂದ ನರಳುವ ಮಕ್ಕಳಿಗೆ ಅಂತ್ರ, ತಾಯತ ಕಟ್ಟುವುದು. ವಿಭೂತಿ ಮಂತ್ರಿ ಸಿರೋಗಕ್ಕೆ ಮದ್ದಾಗಿಕೊಡುವುದು, ಸಣ್ಣಪುಟ್ಟ ಜೋತಿಷ್ಯ ಹೇಳುವುದು ಈ ಎಲ್ಲದರಿಂದ ಭಿಕ್ಷೆ ಪಡೆಯುವುದಷ್ಟೆ ದೊಂಬಿದಾಸ, ಆಟದಾಸ,ಚಕ್ರವಾರ್ಯ ದಾಸ ಮುಂತಾಗಿ ಕರೆಯಲಾಗುವ ಅಲೆ ಮಾರಿಗಳವರು. ರಾಮಯಣ, ಮಹಾಭಾರತಗಳನ್ನು ನಾಲಗೆ ಮೇಲಿಟ್ಟು ಕೊಂಡು ಊರೂರು ಸುತ್ತುತ್ತ ಹಾಡುತ್ತ ಮಹಾಕಾವ್ಯಗಳನ್ನು ಕಾಲಾಂತರಗಳಿಂದ ಜೀವಂತವಾಟ್ಟವರು.

ಸಿ ಎಸ್ ದ್ವಾರಕಾನಾಥ್