ಬರಗೂರು ರಾಮಚಂದ್ರಪ್ಪ ಕಂಡಂತೆ ದೊಂಬಿದಾಸ

ನಮ್ಮೂರಿಗೆ ದೊಂಬಿದಾಸರು ಪ್ರತಿವರ್ಷವೂ ಒಂದು ಸಾರಿ ಬರುತ್ತಿದ್ದರು. ನಾಟಕ ಆಡುತ್ತಿದ್ದರು. ಅನಂತರ ಹೋಗುತ್ತಿದ್ದರು. ಮೋದಲೇ ಕಲಾಸಕ್ತನಾಗಿದ್ದ ನನಗೆ ಅವರನ್ನು ಕಂಡು ಮಾತನಾಡಿಸುವ ತವಕ. ಆದರೆ ಅಂಥವರ ಸಹವಾಸ ಯಾಕೆ ಯಾಕೆ ಎಂಬ ಹಿರಿಯರ ಬೇಸರ. ಆದರೆ ನನ್ನ ತವಕದ ತ್ರೀವತೆಯೇ ಗೆಲ್ಲುತ್ತಿತ್ತು. ನಾಟಕ ನೋಡೋದು; ಮಾರನೇ ದಿನ ಅವರಿದ್ದಲ್ಲಿಗೆ ಹೋಗಿ ಮಾತಾಡಿಸಿ ಆನಂದ ಪಡೋದು, ಅದನ್ನು ಬರೀ ಆನಂದ ಎಂದರೆ ಸಾಲದು; ಅದೊಂದು ಪುಳಕ! ದೊಂಬಿದಾಸರು ನನ್ನ ಪಾಲಿನ 'ಆಲೆಮಾರಿ ಕಲಾರಾಧಕರು'. ಕಷ್ಟವನ್ನು ನುಂಗಿಕೊಂಡು ಕಲೆಯನ್ನೇ ಕಸುಬಾಗಿಸಿಕೊಂಡು ಬದುಕುತ್ತ ಬಂದವರಿಗೆ ಅಂತರಂಗದಲ್ಲೇ ನಮಿಸಿರುವೆ.

ಬರಗೂರು ರಾಮಚಂದ್ರಪ್ಪ